     ಮೂಲದೊಡನೆ ಪರಿಶೀಲಿಸಿ 

ಕಪ್ಪಿಗಳು ಮತ್ತು ಪಟ್ಟಿಗಳು : ಒಂದು ಚಾಲಕದಂಡದಿಂದ ಮತ್ತೊಂದು ಚಾಲಕದಂಡಕ್ಕೆ ಭ್ರಾಮಕಶಕ್ತಿಯನ್ನು ರವಾನಿಸುವ ಯಾಂತ್ರಿಕ ವ್ಯವಸ್ಥೆ (ಪುಲ್ಲೀಸ್ ಅಂಡ್ ಬೆಲ್ಟ್‌್ಸ). ಚಾಲಕ ಕಪ್ಪಿಯ ಬಳಿ ಉತ್ಪತ್ತಿಯಾದ ಭ್ರಾಮಕಶಕ್ತಿಯನ್ನು ಅದು ಪಟ್ಟಿಗೆ ವರ್ಗಾಯಿಸುತ್ತದೆ. ಇದನ್ನು ಪಟ್ಟಿ ಅದರ ಸುತ್ತು ಚಲನೆಯಲ್ಲಿ ಚಾಲಿತ ಕಪ್ಪಿಗೆ ರವಾನಿಸುತ್ತದೆ.

ಪಟ್ಟಿ ಚಾಲನಗಳ (ಬೆಲ್ಟ್‌ ಡ್ರೈವ್ಸ್‌) ಬಳಕೆ : ಚಾಲಕದಂಡಗಳ ನಡುವಣ ಅಂತರ ಹೆಚ್ಚು ಇರುವಲ್ಲಿ, ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಆಘಾತಗಳನ್ನು ತಾಳಿಕೊಳ್ಳ ಬೇಕಾದಲ್ಲಿ, ಯಂತ್ರ ಭಾಗಗಳಿಗೆ ಅಪಾಯವಾಗದಂತೆ ಅತಿ ಹೆಚ್ಚಿನ ತೂಕವನ್ನು ತಡೆದುಕೊಳ್ಳಬೇಕಾದಲ್ಲಿ (ತೂಕ ಅತಿ ಹೆಚ್ಚಾದಾಗ ಪಟ್ಟಿ ಜಾರುವುದರಿಂದ ಇದು ಸಾಧ್ಯ), ವೆಚ್ಚ ಕಡಿಮೆ ಆಗಬೇಕಾದಲ್ಲಿ ಮತ್ತು ಕಾರ್ಯಾಚರಣೆಯಲ್ಲಿ ಶಬ್ದ ಕಡಿಮೆ ಇರಬೇಕಾದಲ್ಲಿ ಪಟ್ಟಿ ಚಾಲಿಗಳ ಬಳಕೆ ಇದೆ. ಪಟ್ಟಿ ಚಾಲಿಗಳಿಂದ ನಿಷ್ಕೃಷ್ಟ ವೇಗ ಪರಿಮಾಣ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ತೂಕ ಹೆಚ್ಚು ಇದ್ದಲ್ಲಿ ಪಟ್ಟಿಯ ಮತ್ತು ಕಪ್ಪಿಯ ಮೇಲ್ಮೈಗಳ ನಡುವೆ ಜಾರುವಿಕೆ ಉಂಟಾಗುತ್ತದೆ.  ಒಂದು ಪಕ್ಷ ಇದು ಉಂಟಾಗದಿದ್ದರೂ ಜರುಗು(ಕ್ರೀಪ್) ಇದ್ದೇ ಇರುತ್ತದೆ.  ಕಾರಣ, ಪಟ್ಟಿಯ ಪದಾರ್ಥ ಸ್ಥಿತಿಸ್ಥಾಪಕ ಗುಣವುಳ್ಳದ್ದು. ಆದ್ದರಿಂದ ಅದರ ಸಡಿಲ ಭಾಗದ ಉದ್ದಕ್ಕಿಂತ ಬಿಗಿ ಭಾಗದ ಉದ್ದ ಹೆಚ್ಚು ಹಿಗ್ಗುತ್ತದೆ. ಅಂದರೆ ಅಸಮ ಹಿಗ್ಗುವಿಕೆ ಇರುತ್ತದೆ. ಇದರ ಪರಿಣಾಮವನ್ನು ಅಳೆಯುವ ಬಗೆ ಹೀಗೆ- ಪಟ್ಟಿಯ ಏಕಮಾನ ಉದ್ದವನ್ನು ತೆಗೆದುಕೊಳ್ಳೋಣ. ಅದು ಬಿಗಿ ಭಾಗದಲ್ಲಿ (1+ಛಿ1)ಕ್ಕೂ ಸಡಿಲ ಭಾಗದಲ್ಲಿ (1+ಛಿ2) ಕ್ಕೂ ಹಿಗ್ಗಲಿ. ಇಲ್ಲಿ ಛಿ1> ಛಿ2 ಚಾಲಕ ಕಪ್ಪಿಗೆ ಪಟ್ಟಿ ಬಿಗಿ ಭಾಗದಿಂದ ಬರುತ್ತದೆ. ಆದರೆ ಚಾಲಿತ ಕಪ್ಪಿಗೆ ಪಟ್ಟಿ ಸಡಿಲ ಭಾಗದಿಂದ ಬರುತ್ತದೆ. ಏಕಮಾನ ಉದ್ದವನ್ನು ಪರಿಗಣಿಸಿದಲ್ಲಿ ಚಲಕ ಕಪ್ಪಿ (1+ಛಿ1) ಉದ್ದವನ್ನು ಪಡೆದು (1+ಛಿ2) ಉದ್ದವನ್ನು ಕೊಡುತ್ತದೆ. ಅಂದರೆ ಹೆಚ್ಚು ಉದ್ದವನ್ನು ಪಡೆದು ಕಡಿಮೆ ಉದ್ದವನ್ನು ಕೊಡುತ್ತದೆ. ಆದ್ದರಿಂದ ಪಟ್ಟಿ (ಛಿ1 - ಛಿ2)ರಷ್ಟು ಹಿಂದೆ ಜರುಗುತ್ತದೆ. ಚಾಲಿತ ಕಪ್ಪಿ ಕಡಿಮೆ ಉದ್ದವನ್ನು ಪಡೆದು ಹೆಚ್ಚು ಉದ್ದವನ್ನು ಕೊಡುತ್ತದೆ. ಎಂದರೆ ಪಟ್ಟಿ (ಛಿ1-ಛಿ2) ರಷ್ಟು ಮುಂದೆ ಜರಗುತ್ತದೆ. ಕಪ್ಪಿಯ ಹೊರಮೈ ವೇಗ ಅದು ಪಡೆಯುವ ಪಟ್ಟಿಯ ಉದ್ದವನ್ನು ಅವಲಂಬಿಸಿದೆ. ಆದ್ದರಿಂದ ಚಾಲಿತ ಕಪ್ಪಿಯ ಹೊರಮೈ ವೇಗ ಚಾಲಕ ಕಪ್ಪಿಯದಕ್ಕಿಂತ ಕಡಿಮೆ. ಈ ಪ್ರಕರಣವೇ ಜರುಗು. ಜರುಗು ಒಂದೇ ಕಾರ್ಯವೇಗವನ್ನು ಸು. ಶೇ. 1ರಷ್ಟು ಕಡಿಮೆ ಮಾಡುತ್ತದೆ. ಜಾರುವಿಕೆಯಿಂದಾಗಿ ಈ ವೇಗ ಮತ್ತೆ ಶೇ. 2ರಷ್ಟು ಕಡಿಮೆಯಾಗುತ್ತದೆ. ಜೊತೆಗೆ ಅತಿ ಹೆಚ್ಚಿನ ಜಾರುವಿಕೆ ಪಟ್ಟಿಗೆ ಹಾನಿಕರ. ಪಟ್ಟಿಗಳ ವೇಗ ಸಾಮಾನ್ಯವಾಗಿ ಸೆಕೆಂಡಿಗೆ 25 ಮೀ ಗಳು. ಇದಕ್ಕಿಂತ ವೇಗ ಹೆಚ್ಚು ಇದ್ದಲ್ಲಿ ಪಟ್ಟಿಯ ಶಕ್ತಿಗೆ ತೂಕಕ್ಕಿಂತಲೂ ಹೆಚ್ಚಾಗಿ ಕೇಂದ್ರಾಪಗಮನ ಶಕ್ತಿಯ ಹೊಡೆತವೇ ಅಧಿಕ ಆಗುತ್ತದೆ.

ಪಟ್ಟಿ ಮತ್ತು ಕಪ್ಪಿಗಳಿಗೆ  ಸಂಸ್ಪರ್ಶವಿರಬೇಕಾದಲ್ಲಿ ಪಟ್ಟಿಯ ಎರಡು ಭಾಗಗಳಲ್ಲೂ ಸಾಕಷ್ಟು ತುಯ್ತ ಇರಬೇಕು. ಪಟ್ಟಿಯ ಬಿಗಿ ಭಾಗದ ತುಯ್ತ ಖಿ1 ಇರಲಿ. ಸಡಿಲ ಭಾಗದ ತುಯ್ತ ಖಿ2 ಇರಲಿ. ಈ ತುಯ್ತಗಳ ವ್ಯತ್ಯಾಸ ಖಿ1 - ಖಿ2. ಇದು ಕಪ್ಪಿಯ ಮೇಲ್ಮೈನಲ್ಲಿ ಭ್ರಾಮಕಶಕ್ತಿಯನ್ನು ಉತ್ಪತ್ತಿಮಾಡುತ್ತದೆ. ಭ್ರಾಮಕಶಕ್ತಿ ಪರಿಣಾಮಕಾರಿ ಶಕ್ತಿಯ ಪ್ರಮಾಣವನ್ನು ಅವಲಂಬಿಸಿದೆ. ತಾತ್ತ್ವಿಕವಾಗಿ ಈ ರೀತಿಯ ಸಮೀಕರಣವನ್ನು ಬರೆಯಬಹುದು.

ಇಲ್ಲಿ ಖಿಛಿ ಕೇಂದ್ರಾಪಗಮನ ಬಲ: =2.718,  m=ಮೇಲ್ಮೈ ನಡುವಣ  ಘರ್ಷಣಾಗುಣಕ, ಚಿ=ತೋಡುಕೋನದ (ಗ್ರೋವ್ ಆಂಗಲ್) ಅರ್ಧಭಾಗ; q=ಕಪ್ಪಿ ಮತ್ತು ಪಟ್ಟಿಯ ನಡುವಣ ಸ್ಪರ್ಶ ಕೋನ. ಖಿ1ರ ಗರಿಷ್ಠ ಬೆಲೆಯ ಪಟ್ಟಿಯ ಕರ್ಷಕ ಬಲವನ್ನು ಅವಲಂಬಿಸಿದೆ. ಶಕ್ತಿ ರವಾನಿಸುವ ಸಾಮಥರ್ಯ್‌ ಪರಿಣಾಮಕಾರಿ ಬಲ (e)ವನ್ನು ಅವಲಂಬಿಸಿದೆ. ಆದ್ದರಿಂದದ ಬೆಲೆ ಅಧಿಕತಮವಾದಾಗ ಶಕ್ತಿ ರವಾನಿಸುವ ಸಾಮಥರ್ಯ್‌ವು ಅಧಿಕತಮವಾಗುತ್ತದೆ.

ಕಪ್ಪಿಯ ರಚನೆ : ಕಪ್ಪಿಗಳನ್ನು ತಾಂಡವಾಳ, ಉಕ್ಕು, ಮರ ಮತ್ತು ಹಿತ್ತಾಳೆಗಳಿಂದ ಮಾಡುತ್ತಾರೆ. ಅಖಂಡವಾಗಿ ಎರಕ ಹೊಯ್ದ ತಾಂಡವಾಳದ ಕಪ್ಪಿಗೆ ಅಖಂಡ ಅಥವಾ ಹೋಳುಗುಂಬ ಇರುತ್ತದೆ. ಅಖಂಡ ಗುಂಬ ಇರುವ ಕಪ್ಪಿಯನ್ನು ಚಾಲಕಂದಡಕ್ಕೆ ಬೆಣೆ (ಕೀ), ಶಂಕುಬೆಣೆ (ಕೋನ್ ಕೀ) ಮತ್ತು ತಿರುಪೊತ್ತಿಗೆ (ಸೆಟ್ ಸ್ಕ್ರೂಸ್) ಇವುಗಳಿಂದ ಅಥವಾ ಇವುಗಳ ಯಾವುದಾದರೂ ಎರಡರ ಸಹಾಯದಿಂದ ಜೋಡಿಸಬಹುದು. ಹೋಳುಗುಂಬ ಇರುವ ಕಪ್ಪಿಗಳಿಗೆ ಬಂಧಿಸಿ ಬೋಲ್ಟುಗಳಿವೆ. ಇವನ್ನು ಬಿಗಿ ಮಾಡಿದಾಗ ಚಾಲಕ ದಂಡಕ್ಕೆ ಬಿಗಿಯಾಗಿ ಕೂರುವಂತೆ ಅವು ಗುಂಬಗಳ ಭಾಗಗಳನ್ನು ಸೆಳೆಯುತ್ತವೆ. ಅಂಥ ಕಪ್ಪಿಗಳಿಗೆ ಇರುವ ತೋಳುಗಳ ಸಂಖ್ಯೆ ಸಾಮಾನ್ಯವಾಗಿ 6. ಕಪ್ಪಿ ಚಿಕ್ಕದಾದಲ್ಲಿ ತೋಳುಗಳ ಸಂಖ್ಯೆ 4. ಕಪ್ಪಿಯ ವ್ಯಾಸ 5 ಅಡಿಗೂ ಹೆಚ್ಚಿದ್ದಲ್ಲಿ ತೋಳುಗಳ ಸಂಖ್ಯೆ 8 ಇರಬಹುದು. ಕಪ್ಪಿಯನ್ನು ಅಖಂಡವಾಗಿ ಎರಕ ಹೊಯ್ಯವುದರ ಬದಲು ಎರಡು ಭಾಗಗಳಾಗಿ ಎರಕ ಹೊಯ್ಯಬಹುದು. ಇಂಥ ಕಪ್ಪಿಯೇ ಹೋಳು ಕಪ್ಪಿ. ಎರಡೂ ಹೋಳುಗಳನ್ನು ಗುಂಬ ಮತ್ತು ನೇಮಿಗಳ ಬಳಿ ಬೋಲ್ಟುಗಳಿಂದ ಒಂದಾಗಿ ಬಂಧಿಸಲಾಗುತ್ತದೆ. ಕಪ್ಪಿಯ ಮುಖದ ಅಗಲ 10” ಗಳಿಂಗಿತಲೂ ಹೆಚ್ಚು ಇರುವುದು ಆವಶ್ಯಕವಾದಾಗ ಹೋಳುಕಪ್ಪಿಯನ್ನು ಅಥವಾ ಹೋಳುಗುಂಬವಿರುವ ಕಪ್ಪಿಯನ್ನು ಬಳಸಲು ಅಷೇಕ್ಷಿಸುತ್ತಾರೆ. ಕಪ್ಪಿಯ ಮುಖದ ಅಗಲ 20.24''ಗಳಿಗೂ ಮೀರಿದ್ದಲ್ಲಿ ನೇಮಿಗೆ ಹೆಚ್ಚಿನ ಆಧಾರ ಬೇಕು. ಇದನ್ನು ಎರಡು ಜೊತೆ ಹೋಳುಗಳ ಸಹಾಯ ದಿಂದ ಕೊಡಬಹುದು, ಮರದ ಮುಖದ ಕಪ್ಪಿಗಳು, ತಾಂಡವಾಳವ ಕಪ್ಪಿಗಳಿಗಿಂತಲೂ ಹೆಚ್ಚು ಹಗುರ. ಸಮತಲಪಟ್ಟಿ ಚಾಲಿಗಳಲ್ಲಿ ಇವು ತಾಂಡವಾಳವ ಕಪ್ಪಿಗಳಿಗಿಂತಲೂ ಹೆಚ್ಚು ಶಕ್ತಿಯನ್ನು ರವಾನಿಸುತ್ತವೆ. ಉಕ್ಕಿನ ತಗಡಿನಿಂದ ಮಾಡಿದ ಕಪ್ಪಿ ತೂಕದಲ್ಲಿ ಹಗುರ. ಎರಕ ಹೊಯ್ದ ಕಪ್ಪಿಯಲ್ಲಿ ಉಳಿಕೆ ಒತ್ತಾಯ (ರೆಸಿಡ್ಯೂಅಲ್ ಸ್ಟ್ರಸ್) ಇರುವ ಸಾಧ್ಯತೆ ಇದೆ. ಆದರೆ ಉಕ್ಕಿನ ತಗಡಿನಿಂದ ಮಾಡಿದ ಕಪ್ಪಿಯಲ್ಲಿ ಇದು ಇರುವುದಿಲ್ಲ. ಇದು ಮಿತವ್ಯಯದಿಂದ ಕೆಲಸ ಮಾಡುತ್ತದೆ. ಅಲ್ಲದೆ ಅದರಷ್ಟೇ ಇರುವ ತಾಂಡವಾಳದ ಕಪ್ಪಿಗಿಂತಲೂ ಇದರ ಜಾರುವಿಕೆ ಕಡಿಮೆ. ಚಿಕ್ಕ ಕಪ್ಪಿಗಳನ್ನು ಹಿತ್ತಾಳೆಯಿಂದ ಮಾಡಬಹುದು. ದಾರ ಮತ್ತು ದುಂಡಗಿರುವ ಪಟ್ಟಿಗಳನ್ನು ಉಪಯೋಗಿಸುವಲ್ಲಿ ಇಂಥವು ಉಪಯುಕ್ತ. ಅಖಂಡ ಕಪ್ಪಿಯ ನೇಮಿಯ ಗರಿಷ್ಠ ವೇಗ ಸೆಕೆಂಡಿಗೆ 25 ಮೀ ಗಳು. ಹೋಳುಕಪ್ಪಿಯ ನೇಮಿಯ ವೇಗ ಇದರ ಶೇ. 50-60 ಇರಬಹುದು. 

ಕಪ್ಪಿಯ ಗುಂಬದ ಹೊರವ್ಯಾಸ ನಾಳದ ವ್ಯಾಸದ (ಬೋರ್) ಎರಡರಷ್ಟಿದೆ. ಗುಂಬದ ಅಗಲ ಹೆಚ್ಚುಕಡಿಮೆ ಕಪ್ಪಿಯ ಅಗಲದಷ್ಟೇ ಇದೆ. ಗುಂಬವನ್ನು ತೋಳುಗಳ ಸಹಾಯದಿಂದ ನೇಮಿಗೆ ಸೇರಿಸಿರುತ್ತಾರೆ. ತೆೆÆೕಳುಗಳ ಒಳನೋಟ ಅಂಡಾಕೃತಿ. ನೇಮಿಯ ಮೇಲ್ಮೈಯನ್ನು ಉಪಯೋಗಿಸುವ ಪಟ್ಟಿಗೆ ಅನುಗುಣವಾಗಿ ಮಾಡಿರುತ್ತಾರೆ. ಕಪ್ಪಿಯ ಮೇಲ್ಮೈನಲ್ಲಿ ತೋಡು ಇದ್ದರೆ ಅದು ಕಪ್ಪಿಚಕ್ರ. 

ಕಪ್ಪಿಯ ಅನ್ವಯ: ಚಾಲಕ ಮತ್ತು ಚಾಲಕ ದಂಡದ ವೇಗ ಒಂದೇ ಇರಬೇಕು. ಆದರೆ ಅದರಿಂದ ಚಲಿಸಲ್ಪಡುವ ಚಾಲಕ ದಂಡದಿಂದ ವಿವಿಧ ವೇಗಗಗಳನ್ನು ಪಡೆಯಬೇಕು. ಅಂಥ ಸಂದರ್ಭಗಳಲ್ಲಿ ಹಂತ ಕಪ್ಪಿಗಳನ್ನು (ಸ್ಟೆಪ್ಡ್‌ ಪುಲ್ಲೀಸ್) ಬಳಸಬಹುದು (ಚಿತ್ರ1). ಅಂಥ ಕಪ್ಪಿಗಳ ವ್ಯಾಸಗಳು ಯಾವುದೇ ಹಂತದಲ್ಲಿ ಬೇಕಾದ ವೇಗ ಪರಿಮಾಣ ಮತ್ತು ಸಾಕಷ್ಟು ಕಟ್ಟಿಯ ತುಯ್ತವನ್ನು ಕಾಯ್ದಕೊಳ್ಳಬೇಕು. ಹಂತ ಕಪ್ಪಿಗಳಲ್ಲಿ ದಾಟು ಪಟ್ಟಿಗಳನ್ನು ಬಳಸಿದಾಗ ಯಾವುದೇ ಒಂದು ಹಂತದ ವ್ಯಾಸಗಳ ಮೊತ್ತ ಮತ್ತಾವುದೇ ಹಂತದ ವ್ಯಾಸಗಳ ಮೊತ್ತಕ್ಕೆ ಸಮ ಇರಬೇಕು. ಒಂದೇ ಅಳತೆಯ ಒಂದು ಜೊತೆ ಕಪ್ಪಿಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ.

ಶಂಕುಕಪ್ಪಿಗಳನ್ನು (ಕೋನ್ ಪುಲ್ಲೀಸ್) ಬಳಸಿಯೂ ಮೇಲೆ ತಿಳಿಸಿದಂತೆ ವಿವಿಧ ವೇಗ ಗಳನ್ನು ಪಡೆಯಬಹುದು. ಇವು ಹಂತ ಶಂಕು ವಿನಂತೆಯೇ (ಸ್ಟೆಪ್ಡ್‌ ಕೋನ್) ಇರುತ್ತವೆ. ಒಂದೇ ವ್ಯತ್ಯಾಸವೆಂದರೆ, ವ್ಯಾಸವ್ಯತ್ಯಾಸ ಹಂತಗಳಲ್ಲಿ ಇರುವುದರ ಬದಲು ಕ್ರಮೇಣ ಇರುತ್ತದೆ, ಇವನ್ನು ಬಳಸುವಲ್ಲಿ ಒಂದು ಅಡಚಣೆ ಉಂಟು. ಪಟ್ಟಿಯು ಕಪ್ಪಿಯ ಗರಿಷ್ಠ ವ್ಯಾಸದ ಕಡೆಗೆ ಹತ್ತಬಹುದು. ಹೇಗಾಗದಂತೆ ಪಟ್ಟಿಯನ್ನು ನಿರ್ದೇಶಿಸುವುದು ಅತ್ಯಗತ್ಯ.

ಚಾಲಕದಂಡಗಳು ಅವು ಇರಬೇಕಾದ ಸ್ಥಳದಿಂದ ಎಳ್ಳಷ್ಟು ಜರುಗಿದ್ದರೂ ಇಲ್ಲವೆ ಪಟ್ಟಿಯಲ್ಲಿ ನ್ಯೂನತೆ ಇದ್ದರೂ ಪಟ್ಟಿ ಕಪ್ಪಿಯಿಂದ ಜಾರಲು ಪ್ರೇರೇಪಣೆ ಉಂಟಾಗುತ್ತದೆ. ನೇಮಿಯಲ್ಲಿ ಪಕ್ಕ ಪಟ್ಟಿಗಳನ್ನು ಬಳಸುವುದರಿಂದ ಪಟ್ಟಿ ಜಾರುವುದನ್ನು ತಡೆಗಟ್ಟ ಬಹುದಾದರೂ ಉಬ್ಬುಕಪ್ಪಿಗಳನ್ನು ಬಳಸುವುದು ಸೂಕ್ತ. ಏಕೆಂದರೆ ಪಕ್ಕಪಟ್ಟಿಗಳನ್ನು ಬಳಸಿದಲ್ಲಿ ಪಟ್ಟಿಯ ಎರಡು ಪಕ್ಕಗಳು ಪಕ್ಕಪಟ್ಟಿಯನ್ನು ಉಜ್ಜುತ್ತವೆ, ತತ್ಪರಿಣಾಮವಾಗಿ ಪಟ್ಟಿಯ ಸವೆತ ಹೆಚ್ಚು. ಉಬ್ಬುಕಪ್ಪಿಯನ್ನು ಬಳಸಿದಲ್ಲಿ ಈ ತೊಂದರೆ ಇರುವುದಿಲ್ಲ. ಉಬ್ಬು ಬಹಳ ಕಡಿಮೆ ಇರಬೇಕು. ಸಾಮಾನ್ಯವಾಗಿ ಇದು ಕಪ್ಪಿಯ ಒಂದು ಮೇಟರ್ ಅಗಲಕ್ಕೆ 25 ಮಿಮೀ. - 70 ಮಿಮೀ. ವರೆಗೆ ಇರುತ್ತದೆ. 

ಚಾಲಿರದಂಡ ನಿಂತರೂ ಚಾಲಕದಂಡ ಚಲಿಸುತ್ತಲೇ ಇರಬೇಕಾದಲ್ಲಿ ಬಿಗಿ ಮತ್ತು ಸಡಿಲ ಕಪ್ಪಿಗಳನ್ನು ಬಳಸಬೇಕು (ಚಿತ್ರ 2). ಬೆಣೆ ಅಥವಾ ತಿರುಪೋತ್ತಿಗೆಗಳಿಂದ ಬಿಗಿ ಕಪ್ಪಿಯನ್ನು ಚಾಲಕದಂಡಕ್ಕೆ ಭದ್ರವಾಗಿ ಸೇರಿಸಲಾಗುತ್ತದೆ. ಆದರೆ ಸಡಿಲಕಪ್ಪಿ ಚಾಲಕಪ್ಪಿ ಚಾಲಿತದಂಡದ ಮೇಲೆ ನಿರರ್ಗಳವಾಗಿ ಸುತ್ತುತ್ತದೆ, ಸೂಕ್ತ ಉಪಕರಣಗಳಿಂದ ಪಟ್ಟಿಯನ್ನು ಬಿಗಿ ಅಥವಾ ಸಡಿಲ ಕಪ್ಪಿಯ ಮೇಲಕ್ಕೆ ತಳ್ಳಬಹುದು.
ಚಾಲನ ವಿಧಗಳು (ಟೈಪ್ಸ್‌ ಆಫ್ ಡ್ರೈವ್): ತೆರದ ಪಟ್ಟಿ ಚಾಲನ (ಓಪನ್ ಬೆಲ್ಪ್‌ ಡ್ರೈವ್) ಮತ್ತು ದಾಟು ಪಟ್ಟಿ ಚಾಲನ (ಕ್ರಾಸ್ಟ್‌ ಬೆಲ್ಟ್‌ ಡ್ರೈವ್): ಎರಡು ಸಮಾನಂತರ ಚಾಲಕದಂಡಗಳ ನಡುವಣ ಅಂತರ 15 ಮೀ ಗಳ ಒಳಗಿದ್ದಲ್ಲಿ ತೆರೆದ ಪಟ್ಟಿ ಚಾಲಿಗಳನ್ನು ಬಳಸುತ್ತಾರೆ. ಈ ರೀತಿಯ ಚಾಲನಗಳಲ್ಲಿ ಸಮಾನಾಂತರ ಚಾಲಕದಂಡಗಳನ್ನು ಸೇರಿಸುವ ಎರಡು ಕಪ್ಪಿಗಳೂ ಒಂದೇ ದಿಕ್ಕಿನಲ್ಲಿ ಸುತ್ತುತ್ತವೆ (ಚಿತ್ರ 3). ಆದರೆ ದಾಟು ಪಟ್ಟಿ ಚಾಲನಗಳಲ್ಲಿ ಕಪ್ಪಿಗಳು ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತವೆ. ದಾಟು ಪಟ್ಟಿಗಳನ್ನು ಬಳಸುವುದರಿಂದ ಹೆಚ್ಚಿನ ಸಂಸ್ಪರ್ಶ ಕೋನವನ್ನು ಪಡೆಯಬಹುದಾದರೂ ಪಟ್ಟಿ ದಾಟುವೆಡೆಯಲ್ಲಿ ಉಜ್ಜುವಿಕೆ ಇರುವುದರಿಂದ ಪಟ್ಟಿ ಬೇಗ ಸವೆದು ಹೋಗುತ್ತದೆ(ಚಿತ್ರ4).
ಕಪ್ಪಿಗಳ ವ್ಯಾಸ ಜ1,ಜ2 ಮತ್ತು ಅವುಗಳ ಕೇಂದ್ರಾಂತರ ಛಿ ಇದ್ದಲ್ಲಿ ತೆರೆದ ಪಟ್ಟಿಯ ಉದ್ದ 

ದಾಟು ಪಟ್ಟಿಯ ಉದ್ದ 

ಪಟ್ಟಿಯ ಹೊರ ಮತ್ತು ಒಳ ಮೇಲ್ಮೈಗಳ ಉದ್ದ ಒಂದೇ ಇರುತ್ತದೆ. ಕಪ್ಪಿಗಳ ಮೇಲೆ ಪಟ್ಟಿ ಹಿಗ್ಗಿದಾಗ ಅದರ ಒಳಮೇಲ್ಮೈ ಕುಗ್ಗುತ್ತದೆ ಮತ್ತು ಹೊರ ಮೇಲ್ಮೈ ಹಿಗ್ಗುತ್ತದೆ. ಇವೆರಡರ ನಡುವೆ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ಪಟ್ಟಿ ಹಿಗ್ಗುವುದೂ ಇಲ್ಲ, ಕುಗ್ಗುವುದೂ ಇಲ್ಲ. ಇದೇ ತಟಸ್ಥಭಾಗ. ಇದು ಸರಿಯಾಗಿ ಪಟ್ಟಿಯಹೊರ ಮತ್ತು ಒಳ ಮೇಲ್ಷೈಗಳ ಮಧ್ಯದಲ್ಲಿದೆ. ತಟಸ್ಥಭಾಗ. ಸ್ಪರ್ಶಕವಾಗುವಂತೆ ಕಪ್ಪಿಯ ಮಧ್ಯಭಾಗವನ್ನು ಕೇಂದ್ರವಾಗಿಟ್ಟುಕೊಂಡು ಎಳೆಯಬಹುದಾದ ಕಾಲ್ಪನಿಕ ವೃತ್ತದ ಹೆಸರು ಅಂತರ ಮೇಲ್ಮೈ. ಇದರ ತ್ರಿಜ್ಯವೇ ಕಪ್ಪಿಯ ಪರಿಣಾಮಕಾರಿ ತ್ರಿಜ್ಯ. ತಟಸ್ಥಭಾಗದ ಮೂಲಕ ಹಾಯ್ದು ಹೋಗುವ ರೇಖೆ ಎರಡೂ ಕಪ್ಪಿಗಳ ಅಂತರ ಮೇಲ್ಮೈಗಳನ್ನು ಸೇರಿಸುತ್ತದೆ. ಹಾಗೆ ಸೇರಿಸುವ ರೇಖೆಯೇ ಅಂತರ ರೇಖೆ (ಚಿತ್ರ 3).

ಮಧ್ಯವರ್ತಿ ಕಪ್ಪಿ (ಇಂಟರ್ಮೀಡಿಯೆಟ್ ಕಪ್ಪಿ) : ಹೆಚ್ಚಿನ ವೇಗ ಪರಿಮಾಣ ಪಡೆಯಲು ಇವನ್ನು ಬಳಸುತ್ತಾರೆ (ಚಿತ್ರ 5).
ಕೋನ ಮತ್ತು ಲಂಬಕೋನ ಚಾಲಿ : ಸಮಾನಾಂತರವಿಲ್ಲದ ಚಾಲಕದಂಡಗಳ ಮೇಲೆ ಸುತ್ತುವ ಕಪ್ಪಿಗಳನ್ನು ಸೇರಿಸಲೂ ಪಟ್ಟಿಯನ್ನು ಉಪಯೋಗಿಸಬಹುದು. ಸಂದರ್ಭ ಯಾವುದೇ ಇರಲಿ, ಕಪ್ಪಿಯನ್ನು ತಲುಪುತ್ತಿದ್ದಂತೆ ಪಟ್ಟಿಯ ಮಧ್ಯರೇಖೆ ಕಪ್ಪಿಯ ಮಧ್ಯ ಮೇಲ್ಮೈನಲ್ಲಿರಬೇಕು. ಪಾದ ತಿರುಚಾಲಿ (ಕ್ವಾರ್ಟರ್ ಟರ್ನ್ ಡ್ರೈವ್) ಇದಕ್ಕೆ ಉತ್ತಮ ನಿರ್ದಶನ (ಚಿತ್ರ 6). ಚಿತ್ರ 7ರಲ್ಲಿ ಕೋನಚಾಲಿಯನ್ನು ತೋರಿಸಿದೆ. 
ಕಾಪು ಕಪ್ಪಿ (ಐಡ್ಲ್‌ ಪುಲ್ಲಿ): ಪಟ್ಟಿಯ ತುಯ್ತವನ್ನು ಹೆಚ್ಚಿಸಲು ಮತ್ತು ಪಟ್ಟಿಯ ಹಿಗ್ಗುವಿಕೆಯಿಂದಾಗುವ ತೊಂದರೆಯನ್ನು ನಿವಾರಿಸಲು ಇದನ್ನು ಬಳಸುತ್ತಾರೆ (ಚಿತ್ರ 8). ಇದು ಜಾರುವಿಕೆಯನ್ನು  ಕಡಿಮೆ ಮಾಡಿ ಪಟ್ಟಿಯ ಆಯಸ್ಸನ್ನು ಹೆಚ್ಚಿಸುತ್ತದೆ. ಅನೇಕ ಕಾಪು ಕಪ್ಪಿಗಳನ್ನು ಬಳಸಿ ಒಂದು ಚಾಲಕ ದಂಡದಿಂದ ಅನೇಕ ಚಾಲಕದಂಡ ಗಳಿಗೆ ಚಲನೆಯನ್ನು ವರ್ಗಾಯಿಸಲು ಸಾಧ್ಯ.

ಪಟ್ಟಿಯ ಪದಾರ್ಥಗಳು : ಪಟ್ಟಿಯ ಪದಾರ್ಥಗಳು ಶಕ್ತಿ, ಬಾಗುವಿಕೆ, ಬಾಳಿಕೆಮತ್ತು ಹೆಚ್ಚು ಘರ್ಷಣಗುಣಕವನ್ನು ಹೊಂದಿರಬೇಕು. ಸಾಮಾನ್ಯ ವಾಗಿ ಪಟ್ಟಿಗಳನ್ನು ಧರ್ಮ ಅಥವಾ ನೇದ ವಸ್ತುಗಳಿಂದ ಮಾಡಿ ರಬ್ಬರ್ ಅಥವಾ ಅಂಥದ್ದೆ ಪದಾರ್ಥಗಳಿಂದ ತುಂಬುತ್ತಾರೆ. ಕಪ್ಪಿಯ ಮೇಲ್ಮೈ ರಬ್ಬರಿನಿಂದ ಮಾಡಿದ್ದಲ್ಲಿ ಉಕ್ಕಿನ ಪಟ್ಟಿಗಳನ್ನು ಬಳಸಬಹುದಾದರೂ ಅವು ಅಷ್ಟಾಗಿ ಬಳಕೆಯಲ್ಲಿಲ್ಲ. ಬಹಳವಾಗಿ ಸಮತಲ ಪಟ್ಟಿಗಳನ್ನು ಓಕ್ಹದಮಾಡಿದ (ಓಕ್ ಟ್ಯಾನ್ಡ್‌) ಚರ್ಮದಿಂದ ಮಾಡುತ್ತಾರೆ. ಬಹಳ ಬಾಗುವ ಪಟ್ಟಿ ಬೇಕಾದಲ್ಲಿ ಕ್ರೋಮ್ ಚರ್ಮವನ್ನು ಉಪಯೋಗಿಸಬಹುದು.         	(ಎಚ್.ಎಲ್.ಕೆ.)    

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ